• July 25, 2024

ಸ.ಉ.ಪ್ರಾ.ಶಾಲೆ ಬದನಾಜೆ ಶಾಲೆಯಿಂದ ವರ್ಗಾವಣೆಗೊಂಡು ಮಾದರಿ ಶಾಲೆ ಬೆಳ್ತಂಗಡಿಗೆ ತೆರಳಲಿರುವ ಅಖಿಲ್ ಕುಮಾರ್ ರವರೊಗೆ ಬೀಳ್ಕೊಡುಗೆ ಸಮಾರಂಭ


ಬದನಾಜೆ: ಕಳೆದ 37 ವರ್ಷಗಳ ಕಾಲ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತಿಯನ್ನು ಹೊಂದಿದ ಮುಖ್ಯ ಶಿಕ್ಷಕಿ ಶ್ರೀಮತಿ ಶಾರದಾ ಸ.ಉ.ಪ್ರಾ.ಶಾಲೆ ಬದನಾಜೆ ಹಾಗೂ ಸ.ಉ.ಪ್ರಾ.ಶಾಲೆ ಬದನಾಜೆ ಇಲ್ಲಿಂದ ವರ್ಗಾವಣೆಗೊಂಡು ಮಾದರಿ ಶಾಲೆ ಬೆಳ್ತಂಗಡಿಗೆ ತೆರಳಿರುವ ಅಖಿಲ್ ಕುಮಾರ್ ಇವರ ಬೀಳ್ಕೊಡುಗೆ ಸಮಾರಂಭವು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬದನಾಜೆ ಇಲ್ಲಿ ಜರುಗಿತು.


ಈ ಕಾರ್ಯಕ್ರಮದಲ್ಲಿ ಬದನಾಜೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಯುತ ಅನಿಲ್ ಡಿಸೋಜ ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಉಜಿರೆ ಗ್ರಾಮ ಪಂಚಾಯತ ಸದಸ್ಯರಾದ ಸವಿತ ,ಲಲಿತ ಹಾಗೂ ಗುರುಪ್ರಸಾದ್, ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ನವೀನ ,ಪ್ರೌಢಶಾಲಾ ಮುಖ್ಯ ಗುರುಗಳಾದ ಜಮುನಾ, ನಿವೃತ್ತ ಮುಖ್ಯ ಗುರುಗಳಾದ ಲಕ್ಷ್ಮಣ ಪೂಜಾರಿ, ಶೈಕ್ಷಣಿಕ ಮಾರ್ಗದರ್ಶಿಗಳಾದ ಶ್ರೀಯುತ ಬಾಬು ಗೌಡ, ಶಾಲಾ ದಾನಿಗಳದ ಶ್ರೀ ರಾಮಯ್ಯಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಮೋಹನ್ ಪರಂಗಾಜೆ, ಪ್ರಗತಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಯುತ ಸೋಮಶೇಖರ್, ಪ್ರಗತಿ ಯುವತಿ ಮಂಡಲದ ಅಧ್ಯಕ್ಷೆಯಾದ ಶ್ರೀಮತಿ ಅರುಣಾಕ್ಷಿ, ಮಾಯ ಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ವಿಠಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸುರೇಶ್ ಮಾಚಾರ್ ಇವರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀಮತಿ ಶಾರದಾ ಮುಖ್ಯ ಗುರುಗಳು ಹಾಗೂ ಶ್ರೀ ಅಖಿಲ್ ಕುಮಾರ್ ದೈಹಿಕ ಶಿಕ್ಷಣ ಶಿಕ್ಷಕರು ಇವರಿಗೆ ಶಾಲಾ ಶಿಕ್ಷಕರ, ಶಾಲಾ ವಿದ್ಯಾರ್ಥಿಗಳ,ಎಸ್.ಡಿ.ಎಂ.ಸಿ.,ಪೋಷಕರ,ಊರವರ,ವಿಧ್ಯಾಭಿಮಾನಿಗಳ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗೌರವ ಪೂರ್ವಕವಾಗಿ ಶುಭವಿದಾಯ ಕೋರಲಾಯಿತು. ಪ್ರಗತಿ ಯುವಕ ಮತ್ತು ಯುವತಿ ಮಂಡಲದ ವತಿಯಿಂದಲೂ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಸಹ ಶಿಕ್ಷಕಿಯಾದ ಶ್ರೀಮತಿ ಭಾರತಿ ಹಾಗೂ ಅತಿಥಿ ಶಿಕ್ಷಕಿಯಾದ ಶ್ರೀಮತಿ ಪ್ರೀತಿ ಇವರು ವಾಚಿಸಿದರು. ಸಹ ಶಿಕ್ಷಕಿ ಶ್ರೀಮತಿ ಲಲಿತ ಹಾಗೂ ಮಮತಾ ಬೀಳ್ಕೊಡಲಿರುವರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗುರುತಿಸುವ ಕಾರ್ಯವನ್ನು ಸಹ ಶಿಕ್ಷಕಿ ಶ್ರೀಮತಿ ಪ್ರತಿಭಾ ಇವರು ನಿರ್ವಹಿಸಿದರು. ಸಹಶಿಕ್ಷಕಿ ಶ್ರೀಮತಿ ಜಯಂತಿ ಸ್ವಾಗತಿಸಿ,ಸಹ ಶಿಕ್ಷಕಿ ಇಂದಿರಾ ಪಿ ಇವರು ಧನ್ಯವಾದವಿತ್ತರು, ಕಾರ್ಯಕ್ರಮವನ್ನು ಶ್ರೀಮತಿ ಜಯಲಕ್ಷ್ಮಿ ನಿರೂಪಿಸಿದರು.

Related post

Leave a Reply

Your email address will not be published. Required fields are marked *

error: Content is protected !!