• September 13, 2024

ಶಿರ್ಲಾಲುವಿನಲ್ಲಿ ಕೆಂಪು ಮಳೆ:ಏನಿದು ವಿಚಿತ್ರ ಘಟನೆ?

 ಶಿರ್ಲಾಲುವಿನಲ್ಲಿ ಕೆಂಪು ಮಳೆ:ಏನಿದು ವಿಚಿತ್ರ ಘಟನೆ?

ಶಿರ್ಲಾಲು:ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬಳ್ಳಿದಡ್ಡ ಮನೆಯ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ ಕೆಂಪು ಮಳೆಯಾದ ಘಟನೆ ಇವತ್ತು ವರದಿಯಾಗಿದೆ.

ಆಲಿ ಕಲ್ಲು ಮಳೆ ಕೇಳಿದ್ದೀರಿ, ಐಸ್ ಮಳೆ ಗೊತ್ತಿದೆ ಆದರೆ ಕೆಂಪು ಮಳೆ( ರಕ್ತ ಮಳೆ) ತೀರ ಅಪರೂಪವಾದದ್ದು.

ಮನೆಗೆ ಅಳವಡಿಸಲಾಗಿದ್ದ ಮೇಲ್ಚಾವಣಿಯಿಂದ ಹರಿದು ಬಂದ ಮಳೆ ನೀರು ಮನೆಯಲ್ಲಿ ಬಕೆಟ್, ಡ್ರಮ್ ಗಳಲ್ಲಿ ಶೇಖರಣೆಯಾದ ನೀರು ಕೆಂಪು ಬಣ್ಣದಲ್ಲಿ ತುಂಬಿಕೊಂಡಿದ್ದು ಇಂದು ಬೆಳಕಿಗೆ ಬಂದಿದೆ.

ಈ ನೀರನ್ನು ಇಗಾಗಲೇ ಸಂಶೋಧನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮನೆಯ ಯಜಮಾನ ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ. ಕೆಂಪು ಮಳೆ ನೀರಿನ ಬಗ್ಗೆ ಇನ್ನಷ್ಠೆ ವರದಿ ಬರಬೇಕಾಗಿದೆ.

ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು ಲ್ಯಾಬ್ ವರದಿಗಾಗಿ ಕಾಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಶಿರ್ಲಾಲು ಗ್ರಾಮ ಪಂಚಾಯತ್ ಸದಸ್ಯ ಮಾಧವ, ಸುದ್ದಿ ಪ್ರತಿನಿಧಿ ಶ್ರೀಧರ ಪೂಜಾರಿ, ಸ್ಟುಡೀಯೋ ಮಾಲಕ ಸಂದೀಪ್ ಇದ್ದರು.

Related post

Leave a Reply

Your email address will not be published. Required fields are marked *

error: Content is protected !!