ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವಕರು: ಜಾಲತಾಣದಲ್ಲಿ ವೈರಲ್ ಆದ ಮದುವೆ ಫೊಟೋಸ್

ಕೊಲ್ಕತ್ತಾ: ಯುವಕರಿಬ್ಬರು ಪರಸ್ಪರ ಪ್ರೀತಿಸಿ ಶಾಸ್ತ್ರೋಕ್ತ ವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.
ಅಭಿಷೇಕ್ ರೇ ಮತ್ತು ಚೈತನ್ಯ ಶರ್ಮಾ ಎಂಬ ಇಬ್ಬರು ಯುವಕರು ಪ್ರೀತಿಸಿ ವಿವಾಹವಾಗಿದ್ದಾರೆ. ಅವರ ಮದುವೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ದಂಪತಿ ಅರಿಶಿನ ಶಾಸ್ತ್ರ ಮತ್ತು ವಿವಾಹ ಸಮಾರಂಭಗಳ ಮೂಲಕ ಮಂತ್ರಗಳನ್ನು ಪಠಿಸಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ವಿವಾಹದಲ್ಲಿ ಕುಟುಂಬಸ್ಥರು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.