• December 8, 2024

ವೇಣೂರು: ಉದಯಪುರ ಹತ್ಯೆ ಖಂಡಿಸಿ ಹಿಂ.ಜಾ.ವೇ. ಪ್ರತಿಭಟನೆ

 ವೇಣೂರು: ಉದಯಪುರ ಹತ್ಯೆ ಖಂಡಿಸಿ ಹಿಂ.ಜಾ.ವೇ. ಪ್ರತಿಭಟನೆ

 

ವೇಣೂರು: ರಾಜಸ್ಥಾನದ ಉದಯಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಟೈಲರ್ ಕನ್ಹಯ್ಯಲಾಲ್ ಎಂಬವರ ಹತ್ಯೆಯ ಭಯೋತ್ಪಾದಕ ಕೃತ್ಯ ಖಂಡಿಸಿ ವೇಣೂರು ಹಿಂದೂ ಜಾಗರಣ ವೇದಿಕೆ ವತಿಯಿಂದ ಜು.3ರಂದು  ಮುಖ್ಯಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಹ ಸಂಯೋಜಕ ನರಸಿಂಹ ಮಾಣಿ, ರಾಜಸ್ತಾನದ ಉದಯಪುರದಲ್ಲಿ ನಡೆದ ಇಸ್ಲಾಂನ ಕ್ರೌರ್ಯ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ. ದೇಶದ ಪರವಾಗಿರುವವರನ್ನು, ದೇಶವನ್ನು ಪ್ರೀತಿ ಮಾಡುವವರನ್ನು, ದೇಶದ ಸಂಸ್ಕೃತಿ, ನೆಲವನ್ನು ಗೌರವಿಸುವವರ ಶಕ್ತಿಯನ್ನು ಧಮನ ಮಾಡುವ ಕಾರ್ಯ ನಡೆಯುತ್ತಿದೆ. ಉಗ್ರಗಾಮಿಗಳ ಈ ಕೃತ್ಯಗಳಿಗೆ ಮದರಸಗಳು ತರಬೇತಿ ನೀಡುತ್ತಿವೆ. ದೇಶದಲ್ಲಿರುವ ಹಿಂದೂ ವಿರೋದಿ ಮದರಸಗಳನ್ನು ತಕ್ಷಣ ನಿಷೇಧ ಮಾಡುಬೇಕು, ಏಕರೂಪದ ಶಿಕ್ಷಣ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ರಕ್ಷಣೆ ನೀಡದ ಕಾಂಗ್ರೆಸ್ ಸರಕಾರ ಜೀವಬೆದರಿಕೆ ಇದ್ದ ಕನ್ನಯ್ಯ ಲಾಲ್‌ಗೆ ರಾಜಸ್ತಾನ ಸರಕಾರ ರಕ್ಷಣೆ ನೀಡಿಲ್ಲ. ಈ ಹತ್ಯೆಗೆ ಕೇವಲ ಮುಸ್ಲಿಂ ಸಂಘಟನೆ ಮಾತ್ರವಲ್ಲ, ಅಲ್ಲಿನ ಕಾಂಗ್ರೆಸ್ ಸರಕಾರ ಕೂಡಾ ನೇರ ಹೊಣೆಯಾಗಿದೆ. ರಾಜಸ್ತಾನದ ಕಾಂಗ್ರೆಸ್ ಸರಕಾರವನ್ನು ತಕ್ಷಣ ವಜಾ ಗೊಳಿಸಬೇಕು. ಉಗ್ರಗಾಮಿಗಳಿಗೆ ಗಲ್ಲುಶಿಕ್ಷೆಯನ್ನು ವಿಧಿಸಬೇಕು, ಕನ್ನಯ್ಯ ಕುಟುಂಬಕ್ಕೆ ರೂ. 1 ಕೋಟಿ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಹಿಂ.ಜಾ.ವೇ ಜಿಲ್ಲಾ ಸಂಯೋಜಕ ಜಗದೀಶ್ ನೆತ್ತರಕೆರೆ, ಜಿಲ್ಲಾ ಪ್ರಮುಖ್ ಪ್ರಶಾಂತ್ ಕೆಂಪುಗುಡ್ಡೆ, ರಕ್ಷಿತ್ ಸಾವ್ಯ, ತಾಲೂಕು ಸಂಯೋಜಕ ನಿರಂಜನ್ ವೇಣೂರು, ಪರಿವಾರ ಸಂಘಟನೆಯ ರಕ್ಷಿತ್ ಬಜಿರೆ ಮತ್ತಿತರರು ಉಪಸ್ಥಿತರಿದ್ದರು. ಉಮೇಶ್ ನಡ್ತಿಕಲ್ಲು ಪ್ರಸ್ತಾವಿಸಿದರು. ಹಿಂ.ಜಾ.ವೇ ಜಿಲ್ಲಾ ಪ್ರಮುಖ್ ಕಿರಣ್ ಶೆಟ್ಟಿ ಮೂರ್ಜೆ ಸ್ವಾಗತಿಸಿ, ವಂದಿಸಿದರು.

ಗ್ರಾಮ ಪಂಚಾಯತ ಅಧ್ಯಕ್ಷರುಗಳಾದ ಜನಾರ್ದನ ಪೂಜಾರಿ, ನೇಮಯ್ಯ ಕುಲಾಲ್ ಭಾಗಿಯಾಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!