• October 16, 2024

ರಾಹುಲ್ ವರ್ಮಾ ಬಳ್ಳಾಲ್ ನಿಧನ

 ರಾಹುಲ್ ವರ್ಮಾ ಬಳ್ಳಾಲ್ ನಿಧನ

 

ಮಂಗಳೂರಿನ ಖ್ಯಾತ ಜೈನ ಮನೆತನದ ಜಯವರ್ಮರಾಜ್ ಬಳ್ಳಾಲ್ ಅವರ ಸುಪತ್ರ ರಾಹುಲ್ ವರ್ಮಾ ಬಳ್ಳಾಲ್ ಅವರು ಇಂದು ನಸುಕಿನ ವೇಳೆಯಲ್ಲಿ ವಿಧಿವಶರಾಗಿದ್ದಾರೆ.

ಅವರು ದ.ಕ ಮತ್ತು ಉಡುಪಿ ಜಿಲ್ಲೆಯ ಸುಪ್ರಸಿದ್ದ‌ ಜೈನಮನೆತನದ ಹೆಮ್ಮೆಯ ಕುಡಿ. ಅಗರ್ಭ ಶ್ರೀಮಂತರಾದರೂ ಅವರು ಹೃದಯಶ್ರೀಮಂತಿಕೆಯ ಮೂಲಕವೆ ಎಲ್ಲರ ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾದವರು. ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡು ಯಶಸ್ವಿ ಉದ್ಯಮಿ ಎನಿಸಿಕೊಂಡವರು. ಕೃಷಿ, ತೋಟಗಾರಿಕೆ, ಹೈನುಗಾರಿಕೆಯ ಬಗ್ಗೆ ಅಪಾರವಾದ ಪ್ರೀತಿಯನ್ನಿಟ್ಟು ಅದನ್ನು ಮುನ್ನಡೆಸಿಕೊಂಡು ಹೋದವರು.

ತನ್ನ ಕುಟುಂಬದಿಂದ ಬಳುವಳಿಯಾಗಿ ಬಂದಿರುವ ದಾನ, ದರ್ಮಾಧಿ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದವರು ರಾಹುಲ್ ವರ್ಮಾ ಬಳ್ಳಾಲ್ ಅವರು.

ಸರಳತೆ, ಸಮಾನತೆ, ಆತ್ಮೀಯತೆ, ನಯ- ವಿನಯತೆ ಅವರ ವ್ಯಕ್ತಿತ್ವಕ್ಕೆ ಶೋಭೆಯನ್ನು ತಂದುಕೊಟ್ಟಿತ್ತು. ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಮಾನವೀಯತೆಯ ಸಾಕಾರ ಮೂರ್ತಿಯಾಗಿದ್ದವರು ಈ ನಮ್ಮ ರಾಹುಲ್ ವರ್ಮಾ ಅವರು.

ಬಳ್ಳಾಲ್ ಮನೆತನ ಸೇವಾಕೈಂಕರ್ಯಗಳನ್ನು ಅಷ್ಟೇ ಆಸಕ್ತಿಯಿಂದ ಮುಂದುವರಿಸಿಕೊಂಡು ಬಂದ ಹೆಗ್ಗಳಿಕೆ ರಾಹುಲ್ ವರ್ಮಾ ಅವರಿಗೆ ಸಲ್ಲಬೇಕು. ಇನ್ನೂ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದ ರೀತಿ ಸ್ಮರಣೀಯ.

ಬಡವ, ಬಲ್ಲಿದರಿಗೆ, ತನ್ನ ಸಂಸ್ಥೆಯ ಕೆಲಸದವರಿಗೆ ಅಪ್ಪುಗೆಯ ಯಜಮಾನನಾಗಿ, ಅವರೆಲ್ಲರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ರಾಹುಲ್ ವರ್ಮಾರವರ ಗುಣವಂತಿಕೆಯನ್ನು ಎಂದು ಮರೆಯಲಾಗದು.

Related post

Leave a Reply

Your email address will not be published. Required fields are marked *

error: Content is protected !!