ಮೊಗ್ರು: ಸ.ಹಿ.ಪ್ರಾ ಶಾಲೆ ಬುಳೇರಿಯಲ್ಲಿ ಪೋಷಕರಿಂದ ಸ್ವಚ್ಛತಾ ಕಾರ್ಯ
ಸ.ಹಿ.ಪ್ರಾ.ಶಾಲೆ.ಬುಳೇರಿ.ಮೊಗ್ರು ಪೋ ಷಕರಿಂದ ಸ್ವಚ್ಛತಾ ಕಾರ್ಯ
ಜೂನ್ 13 ರಂದು
ಪೋಷಕರಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು.
ಸರಕಾರಿ. ಹಿರಿಯ.ಪ್ರಾಥಮಿಕ ಶಾಲೆ ಬುಳೇರಿಯಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕರ ಸಹಾಯದಿಂದ ಶ್ರಮದಾನ ಕೈಗೊಳ್ಳಲಾಯಿತು.
ಶಾಲಾ ಮೈದಾನವನ್ನು ಸ್ವಚ್ಛಗೊಳಿಸಿ ಮತ್ತು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಯಿತು.
ಶಾಲೆಯ ಸುತ್ತ ಮುತ್ತಲಿನ ಗಿಡ, ಮುಳ್ಳು, ಪೊದೆ ಗಳನ್ನು ತೆಗೆದು ಹಾಕಲಾಯಿತು ಮತ್ತು ಶಾಲಾ ಗೇಟಿನ ಹತ್ತಿರ ಇರುವ ಮರಗಳನ್ನು ಮಿಷನ್ ಮೂಲಕ ತೆರವುಗೊಳಿಸಲಾಯಿತು.ಶಾಲಾ ಅಂಗಳದಲ್ಲಿ ನೀರು ನಿಂತ ಜಾಗಗಳಿಗೆ ಮರಳು ಹಾಕಿ ಮಕ್ಕಳಿಗೆ ಆಟವಾಡಲು ಸಜ್ಜುಗೊಳಿಸಲಾಯಿತು.