ಮೂಡಬಿದಿರೆ: ಧಾರಾಕಾರ ಮಳೆಗೆ ಉರುಳಿ ಬಿದ್ದ ಕಾಲೇಜ್ ಕಾಂಪೌಂಡ್
ಮೂಡಬಿದಿರೆ: ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಮೂಡಬಿದಿರೆ ಮೈಟ್ ಕಾಲೇಜ್ ನ ಕಾಂಪೌಂಡ್ ಕುಸಿದುಬಿದ್ದಿದ್ದು ರಸ್ತೆಯಲ್ಲಿ ನಿಂತಿದ್ದ ಮೂರು ಕಾರಿಗೆ ಹಾನಿಯುಂಟಾದ ಘಟನೆ ವರದಿಯಾಗಿದೆ.
ಕಾಂಪೌಂಡ್ ಕುಸಿಯುವ ವೇಳೆ ಕಾರಿನಲ್ಲಿ ಯಾರೂ ಇಲ್ಲದಿದುದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ