• October 16, 2024

ಮುಂಡಾಜೆ: ಯಂಗ್ ಚಾಲೆಂಜರ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ- ಶೈಕ್ಷಣಿಕ ನಿಧಿ‌ ಹಸ್ತಾಂತರ

 

ಮುಂಡಾಜರ: ಉತ್ತಮ ಹವ್ಯಾಸ, ಸನ್ನಡತೆ, ಉದ್ಯೋಗ ಮತ್ತು ಶಿಕ್ಷಣದ ವೇಳೆ ಶಿಸ್ತು, ವಿಷಯದ ಬಗೆಗಿನ ಆಸಕ್ತಿ, ಸ್ಥಳೀಯ ಮತ್ತು ಜಾಗತಿಕ ವಿದ್ಯಮಾನಗಳ ಬಗೆಗಿನ ಸಾಮಾನ್ಯ ಅರಿವು, ಕಲೆಕೆಯ ಜೊತೆಗೆ ಸಾಮಾಜಿಕ ಪ್ರಜ್ಣೆ ನಮ್ಮನ್ನು ಉನ್ನತಿಗೇರಿಸುತ್ತದೆ ಎಂದು ಶಿಕ್ಷಣ‌ ತಜ್ಞೆ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ರಚನಾ ತ್ಹಾಮನ್‌ಕರ್ ಹೇಳಿದರು.

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ವತಿಯಿಂದ ನಡೆದ ವಾರ್ಷಿಕ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ನಿಧಿ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಮಾತುಗಳನ್ನಾಡಿದರು.


ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶೀನಪ್ಪ ಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿದ್ದ ಭಿಡೆ ಮೆಡಿಕಲ್ಸ್ ಮಾಲಿಕ ಸುಜಿತ್ ಭಿಡೆ, ಶ್ರೀ ಲಕ್ಷ್ಮೀ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ. ಶಿವಾನಂದ ಸ್ವಾಮಿ, ಕೃಣಿಕ ಹಾಗೂ ಉದ್ಯಮಿ ಅರೆಕ್ಕಲ್ ರಾಮಚಂದ್ರ ಭಟ್, ಉದ್ಯಮಿ ಶಮಂತ್ ಕುಮಾರ್ ಜೈನ್, ಚಿತ್ಪಾವನ ಬ್ರಾಹ್ಮಣ ಸಂಘದ ಉಪಾಧ್ಯಕ್ಷೆ ಅಶ್ವಿನಿ ಹೆಬ್ಬಾರ್ ಭಾಗಿಯಾಗಿದ್ದು ಶುಭ ಹಾರೈಸಿದರು.

ಸ್ಥಳೀಯ ವಿದ್ಯಾ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಆಯ್ದ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನಿಧಿ ಹಸ್ತಾಂತರಿಸಲಾಯಿತು.
ಕೋಶಾಧಿಕಾರಿ ಸಾಂತಪ್ಪ ಕಲ್ಮಂಜ,‌ ಸೀನ, ಸುರೇಶ್ ಗೌಡ, ಕಸ್ತೂರಿ‌ ಕೆ ಪೂಜಾರಿ, ಕೃಷ್ಣಪ್ಪ, ಸಚಿನ್ ಹೆಬ್ಬಾರ್ ಭಾಗಿಯಾಗಿದ್ದರು.


ಸಂಘದ ಸಂಚಾಲಕ ನಾಮದೇವ ರಾವ್ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯದರ್ಶಿ ಶಶಿಧರ ಠೋಸರ್ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ಧನ್ಯವಾದವಿತ್ತರು.


ಅನಂತ ಫಡ್ಕೆ ಟ್ರಸ್ಟ್ ಮುಂಡಾಜೆ, ತುಕಾರಾಮ ಸಾಲ್ಯಾನ್, ಲಕ್ಷ್ಮೀ‌ನಾರಾಯ ಶೆಣೈ, ಹರಿಪ್ರಸಾದ್ ಭಟ್ ಪಿತ್ತಿಲಕೋಡಿ, ಆರತಿ‌ಹೆಬ್ಬಾರ್ ಸ್ಮರಣಾರ್ಥ ಇವರುಗಳು ಪ್ರಾಯೋಜಕತ್ವ ನೀಡಿ ಸಹಕರಿಸಿದರು. ನಕ್ಷಿತಾ ಶೆಟ್ಟಿ ಪ್ರಾರ್ಥನೆ ಹಾಡಿದರು.

Related post

Leave a Reply

Your email address will not be published. Required fields are marked *

error: Content is protected !!