• July 16, 2024

ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಗಾಯಕ ಅಜಿತ್ ಪೂಜಾರಿ ಕನ್ಯಾಡಿಯವರ ದಕ್ಷಿಣ ಅಯೋಧ್ಯೆ-2 ಕನ್ನಡ ಭಕ್ತಿಗೀತೆ ಬಿಡುಗಡೆ: ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಮೆಚ್ಚುಗೆ

ಕನ್ಯಾಡಿ: ಸಂಗೀತ ಸಾಧನೆಯ ಪಥದಲ್ಲಿ ಸಾಗುತ್ತಿರುವ ಬೆಳ್ತಂಗಡಿ ತಾಲೂಕಿನ ಸಂಗೀತ ಸಾಧಕ ಅಜಿತ್ ಪೂಜಾರಿ ಕನ್ಯಾಡಿ ಇವರ ನಿರ್ದೇಶನ ಸಾಹಿತ್ಯ ಗಾಯನದಲ್ಲಿ ಮೂಡಿಬಂದ ಆಲ್ಬಂ ಸಾಂಗ್ ದಕ್ಷಿಣ ಅಯೋಧ್ಯೆ-2 ಕನ್ನಡ ಭಕ್ತಿಗೀತೆ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಜಾತ್ರಾಮಹೋತ್ಸವದಂದು ಸಾಂಸ್ಕೃತಿಕ ವೇದಿಕೆಯಲ್ಲಿ ಮಾ.27 ರಂದು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಗಾಯಕ ಅಜಿತ್ ಪೂಜಾರಿ ಕನ್ಯಾಡಿ ಹಾಗೂ ಗಾಯಕಿ ಜೀವಿತಾ ಪಜಿರಡ್ಕ ಇವರ ಅತ್ಯದ್ಬುತವಾದ ಸುಮಧುರ ಕಂಠದಲ್ಲಿ ಮೂಡಿಬಂದ, ಚೇತನ್ ಪಿಲಿಪಂಜರ ಇವರ ಛಾಯಾಗ್ರಹಣದ ಕೈಚಲಕದಲ್ಲಿ, ಸಹನ್ ಎಮ್ ಎಸ್ ಉಜಿರೆ ಇವರ ಸಂಕಲನದಲ್ಲಿ , ನವೀನ್ ಸುವರ್ಣ ಕನ್ಯಾಡಿ, ರಾಘವೇಂದ್ರ ಗೌಡ ಹೂಂಕ್ರೊಟ್ಟು, ಸತ್ಯನಾರಾಯಣ ಗುಡಿಗಾರ್ ನೀರಚಿಲುಮೆ ಹಾಗೂ ಸುನಿಲ್ ಕನ್ಯಾಡಿ ಇವರೆಲ್ಲರ ಸಹಕಾರದಿಂದ ಸುಂದರವಾಗಿ ಮೂಡಿ ಬಂದಿದೆ.

Related post

Leave a Reply

Your email address will not be published. Required fields are marked *

error: Content is protected !!