ಪಡಂಗಡಿ- ಬರಾಯ ಸಾಎರುವ ರಸ್ತೆ ಬಿರುಕು: ಸ್ಥಳೀಯರಿಗೆ ಆತಂಕ
ಪಡಂಗಡಿ: ಪಡಂಗಡಿಯಿಂದ ಬರಾಯ ಕಡೆ ಗೆ ತೆರಳುವ ರಸ್ತೆಯು ಬಿರುಕುಂಟಾಗಿದ್ದು ಸ್ಥಳೀಯರು ಆ ರಸ್ತೆ ಮೂಲಕ ಸಾಗಲು ಭಯಭೀತರಾಗಿದ್ದಾರೆ.
ಈ ರಸ್ತೆ ಪಡಂಗಡಿ ಗ್ರಾ.ಪಂ ಗೆ ಒಳಪಟ್ಟಿದ್ದು, ಬರೆಯ ಭಾಗವನ್ನು ಸಂಪರ್ಕಿಸುವ ಒಳ ರಸ್ತೆ ಇದಾಗಿದೆ.
ಎರಡು ದಿನದಿಂದ ಸುರಿಯುವ ಭಾರೀ ಮಳೆಗೆ ಈ ಅವಘಡ ಸಂಭವಿಸಿದ್ದು ರಸ್ತೆಯುದ್ದಕ್ಕೂ ನೀರು ತುಂಬಿದ್ದು ಪ್ರಯಾಣಿಕರಿಗೆ ಓಡಾಡಲು ಕಷ್ಟ ಪಡುವಂತಾಗಿದೆ.
ಸ್ಥಳೀಯ ಉದ್ಯೋಗಸ್ಥರು, ಶಾಲಾ ಮಕ್ಕಳು ಕೃಷಿಕರು ದಿನನಿತ್ಯ ಪಡಂಗಡಿಯನ್ನು ಸಂಪರ್ಕಿಸಲು ಅವಲಂಬಿಸಿರುವ ರಸ್ತೆ ಇದಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಅವಘಡಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.
ಸ್ಥಳೀಯ ಗ್ರಾ.ಪಂ ಇದರ ಬಗ್ಗೆ ಗಮನ ಹರಿಸಬಾಎಕಾಗಿ ಸ್ಥಳೀಯರ ಆಕ್ಷೇಪವಾಗಿದೆ.