ಜುಲೈ 13 ರಂದು ನಡೆಯಲಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಕೇಂದ್ರ ಕಛೇರಿ, ಬೆಳ್ತಂಗಡಿ ಇದರ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಕೇಂದ್ರ ಕಛೇರಿ, ಬೆಳ್ತಂಗಡಿ ಇದರ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಹಾಗೂ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭವು ಜುಲೈ 13ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯು ಇಂದು ಶ್ರೀ ಗುರುದೇವ ವಿವಿಧೋದ್ದೇಶದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎನ್. ಪದ್ಮನಾಭ ಮಾಣಿಂಜ , ಉಪಾಧ್ಯಕ್ಷರಾದ ಭಗೀರಥ, ಜಿ , ವಿಶೇಷಾಧಿಧಿಕಾರಿಯಾದ ಯಂ. ಮೋನಪ್ಪ ಪೂಜಾರಿ ಕಂಡೆತ್ಯಾರು , ಮುಖ್ಯ ಕಾರ್ಯನಿರ್ವಾಯಣಾಧಿಕಾರಿಯಾದ ಅಶ್ವತ್ಥ ಕುಮಾರ್ , ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀಮತಿ ಸುಜಿತಾ ವಿ. ಬಂಗೇರ, ಸಂಜೀವ ಪೂಜಾರಿ, ಶ್ರೀಮತಿ ತನುಜಾ ಶೇಖರ್, ಕೆ.ಪಿ. ದಿವಾಕರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ್, ಜಯವಿಕ್ರಮ. ಪಿ, ಧರಣೇಂದ್ರ ಕುಮಾರ್, ಆನಂದ ಪೂಜಾರಿ ಸರ್ವೆದೋಳ, ಡಾ| ರಾಜಾರಾಮ್ ಕೆ.ಬಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.