• December 9, 2024

ಕಾಯರ್ಪಾಡಿ: ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

 

ಕಾಯರ್ಪಾಡಿ: ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವು ಏ.7 ರಂದು ಜರುಗಿತು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಗುರುವಾಯನಕೆರೆ ಇದರ ವತಿಯಿಂದ ಕಾರ್ಯಾಪಾಡಿ ಒಕ್ಕೂಟದಲ್ಲಿ ಆರಂಭ ಗೊಂಡ ಆರಾಧನಾ ಜ್ಞಾನ ವಿಕಾಸ ಕೇಂದ್ರವು ಮಾತೃ ಶ್ರೀ ಹೇಮಾವತಿ ಡಿ ಹೆಗಡ್ಡೆಯವರ ಮಾರ್ಗದರ್ಶನದಲ್ಲಿ ಕಳೆದ 23ವರ್ಷ ಗಳಿಂದ ನಡೆದು ಬಂದಿದ್ದು ಕೇಂದ್ರದ ಸದಸ್ಯರುಮಹಿಳಾ ಸಬಲೀಕರಣ
ಕೌಟುಂಬಿಕ ಸಾಮರಸ್ಯವಯುಕ್ತಿಕ ಸ್ವಚ್ಛತೆ ಪೌಷ್ಟಿಕ ಆಹಾರ
ಆರ್ಥಿಕ ಸಬಲೀಕರಣ ಕೌಶಲ್ಯಅಭಿವೃದ್ಧಿ ಮುಂತಾದ ಹಲವು ವಿಚಾರ ಗಳ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ತಮ ರೀತಿಯ ಅಭಿವೃದ್ಧಿ ಹೊಂದಿರುತಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಈ ಕೇಂದ್ರಗಳಿಗೆ ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರ ಎಂದು ಗುರುತಿಸಿ ಪ್ರಮಾಣ ಪತ್ರವನ್ನು ಮಾನ್ಯ ಯೋಜನಾಧಿಕಾರಿಯವರಾದ ಯಶವಂತ್ ಪ್ರಮಾಣ ಪತ್ರ ನೀಡಿದರು. ಸೇವಾಪ್ರತಿನಿಧಿ ಸರೋಜ ಇವರು ಕಾರ್ಯಕ್ರಮ ನಿರೂಪಿಸಿದರು ಕೇಂದ್ರದ ಸದಸ್ಯರಾದ ಪ್ರಸನ್ನ ಭಟ್ ಧನ್ಯವಾದ ನೀಡಿದರು.

Related post

Leave a Reply

Your email address will not be published. Required fields are marked *

error: Content is protected !!