• July 25, 2024

ಕಮೀಷನರ್ ಶಶಿಕುಮಾರ್ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿಗೆ ಕ್ಲಾಸ್!

 ಕಮೀಷನರ್ ಶಶಿಕುಮಾರ್ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿಗೆ ಕ್ಲಾಸ್!

ಮಂಗಳೂರು: ನಗರದ ಪೊಲೀಸ್ ಮೈದಾನದಲ್ಲಿ ರೌಡಿಗಳ ಪರೇಡ್ ವೇಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶಶಿಕುಮಾರ್ ಅವರು ಕಿಶೋರ್ ಶೆಟ್ಟಿಗೆ ಬಟ್ಟೆ ಬಿಚ್ಚಿಸಿ ಏನಪ್ಪ ಮೈಮೇಲೆ ಇಷ್ಟು ಟ್ಯಾಟೂ ಹಾಕಿಸಿಕೊಂಡಿದ್ಯಾ ಎಂದು ಕೇಳಿದ್ದಾರೆ. ಇದಕ್ಕೆ ಕಿಶೋರ್ ಶೆಟ್ಟಿ ತಾಯಿಯ ಟ್ಯಾಟೋ ಎಂದು ಉತ್ತರಿಸಿದ್ದಾನೆ . ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ? ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು ಕಮಿಷನರ್ ಹೇಳಿದ್ದಾರೆ.

ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದೀಯಾ ಸಪ್ಲೈ ನಿಲ್ಲಿಸಿದ್ದೀಯ ನೀನು ತಿನ್ನುತ್ತೀಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತೀಯಾ? ಎಂದು ಕಿಶೋರ್ ಶೆಟ್ಟಿಗೆ ಕಮಿಷನರ್ ವಿಚಾರಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!