• October 16, 2024

ಉಡುಪಿಯ ಸಿನಿಶೆಟ್ಟಿಗೆ ಮಿಸ್ ಇಂಡಿಯಾ ಗೌರವ

 ಉಡುಪಿಯ ಸಿನಿಶೆಟ್ಟಿಗೆ ಮಿಸ್ ಇಂಡಿಯಾ ಗೌರವ

 

ಉಡುಪಿ: ಕರಾವಳಿಯ ಮತ್ತೊಂದು ಬೆಡಗಿ ಮಿಸ್ ಇಂಡಿಯಾ ಗೌರವಕ್ಕೆ ಪಾತ್ರರಾಗಿದ್ದಾರೆ. ಉಡುಪಿ ಮೂಲದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ಅವಾರ್ಡ್ ಗೌರವ ಲಭ್ಯವಾಗಿದ್ದು, ಉಡುಪಿಯ ಸಿನಿ ಶೆಟ್ಟಿ ಕುಟುಂಬಸ್ಥರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಿದೆ.

ಸಿನಿ ಸಾಧನೆಯನ್ನು ನೆನಪಿಸಿ ಕುಟುಂಬ ಸಂತಸಪಟ್ಟಿದೆ. ಸಿನಿ ಶೆಟ್ಟಿ ಉಡುಪಿಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ನಿವಾಸಿಯಾಗಿದ್ದು, ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈಯಲ್ಲಿಯೇ. ಆದರೆ ವರ್ಷಕ್ಕೊಮ್ಮೆ ಹುಟ್ಟೂರಿಗೆ ಬಂದು ಕುಟುಂಬದವರೊಂದಿಗೆ ಬೆರೆಯುತ್ತಿದ್ದರು. ಸಿನಿ ಶೆಟ್ಟಿ ತಂದೆ ಸದಾನಂದ ಶೆಟ್ಟಿ ಎಂಬತ್ತರ ದಶಕದಲ್ಲಿ ಮುಂಬೈಗೆ ತೆರಳಿದ್ದರು..ಮುಂಬೈಯಲ್ಲಿ ಹೋಟೆಲ್ ಉದ್ಯಮ ಮಾಡುತ್ತಿರುವ ಸದಾನಂದ ಶೆಟ್ಟಿ ಯಶಸ್ವಿ ಉದ್ಯಮಿಯಾಗಿದ್ದಾರೆ.

ಕಲಿಕೆ, ನೃತ್ಯ, ಮಾಡಲಿಂಗ್ ನಲ್ಲೂ ಸಿನಿ ಪರಿಣಿತೆ. ನಮ್ಮ ಮನೆಯ ಮಗಳು ಮುಂದೊಂದು ದಿನ ವಿಶ್ವಸುಂದರಿಯೂ ಆಗುತ್ತಾಳೆ ಅಂತಾ ಸಿನಿ ಶೆಟ್ಟಿ ಅಜ್ಜ, ಅಜ್ಜಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನಂಜೆ ಮಡುಂಬು ವಿನ ಹುಡುಗಿ ಈಗ ಮಿಸ್ ಇಂಡಿಯಾ ಬೆಡಗಿ ಆಗಿರೋದು ಮನೆಯಲ್ಲಿ ಹಬ್ಬದ ವಾತವರಣ ಮೂಡಿಸಿದೆ. ಕರ್ನಾಟಕವನ್ನು ಪ್ರತಿನಿಧಿಸಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿರುವ ಸಿನಿ ಶೆಟ್ಟಿ,ಈಗಲೂ ನಿರಂತರವಾಗಿ ಅಜ್ಜ-ಅಜ್ಜಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ.

ಸಿನಿ ಅಜ್ಜಿ ಶಶಿಕಲಾ ಶೆಟ್ಟಿ ಮಾತನಾಡಿ, ಸಿನಿ ಶೆಟ್ಟಿ ಬಹಳ ಚೂಟಿ ಹುಡುಗಿ. ಚಿಕ್ಕಂದಿನಿಂದಲೂ ಆಕೆಯನ್ನು ಗಮನಿಸುತ್ತಿದ್ದೇವೆ. ಊರು, ಹಳ್ಳಿ, ಹಳ್ಳಿ ಯ ವಾತವರಣ ಎಲ್ಕವೂ ಆಕೆಗೆ ಇಷ್ಟ. ನಾವು ಮುಂಬೈಗೆ ಹೋದಾಗ ಬಹಳ ಆತ್ಮೀಯವಾಗಿ ನಮ್ಮ ಜೊತೆ ಇರುತ್ತಾಳೆ. ಅವಳು ಮಿಸ್ ವರ್ಲ್ಡ್ ಆಗುತ್ತಾಳೆ ಅಂತಾ ಹೇಳಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!